ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದ ಅತ್ಯಂತ ಆಘಾತಕಾರಿ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗೆ ಚಿಕಿತ್ಸೆಗಾಗಿ ಬರುವ ಮಹಿಳೆಯರ ಮೇಲೆ ಅಲ್ಲಿನ ರೇಡಿಯಾಲಜಿಸ್ಟ್ ಒಬ್ಬ ಲೈಂಗಿಕ ದೌರ್ಜನ್ಯ(Sexual assault) ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಯಕುಮಾರ್ ಎಂಬಾತನ ಕುಕೃತ್ಯ ಹಾಗೂ
ಆರೋಪಿ ಜಯಕುಮಾರ್ ಖಾಸಗಿ ಸ್ಕ್ಯಾನಿಂಗ್ ಸೆಂಟರ್ನನಲ್ಲಿ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದಾನೆ ಎಂದು ಅನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯ ಧೈರ್ಯ, ಮೊಬೈಲ್ನಲ್ಲಿ ದಾಖಲಾದ ದೃಶ್ಯ!
ಹೊಟ್ಟೆ ನೋವಿನ ಕಾರಣದಿಂದ ಪತಿಯೊಂದಿಗೆ ಸ್ಕ್ಯಾನಿಂಗ್ ಸೆಂಟರ್ಗೆ ಬಂದಿದ್ದ ಸಂತ್ರಸ್ತ ಮಹಿಳೆಯ ಮೇಲೆ ಜಯಕುಮಾರ್ ಈ ಅಸಹ್ಯ ಕೃತ್ಯ ಎಸಗಿದ್ದಾನೆ.. ಸ್ಕ್ಯಾನಿಂಗ್ ನೆಪದಲ್ಲಿ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ್ದಕ್ಕೆ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಕಾಮುಕ ಜಯಕುಮಾರ್ ಅಲ್ಲಿಗೆ ಸುಮ್ಮನಾಗದೆ, ಈ ವಿಷಯವನ್ನು ಯಾರಿಗೂ ಹೇಳದಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಧಮ್ಮಿ ಹಾಕಿದ್ದಾನೆ. ಆದರೆ, ಮಹಿಳೆ ಧೃತಿಗೆಡದೆ, ಈ ಘಟನೆಯ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ದೃಶ್ಯಗಳ ಸಮೇತ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.(Sexual assault)
ಪೊಲೀಸರ ವಿರುದ್ಧವೂ ಆರೋಪ:
ಇಷ್ಟೆಲ್ಲಾ ಸ್ಪಷ್ಟ ದೂರು ಮತ್ತು ಸಾಕ್ಷ್ಯಗಳಿದ್ದರೂ, ಆನೇಕಲ್ ಪೊಲೀಸರು ಆರೋಪಿ ಜಯಕುಮಾರ್ನನ್ನು ಈವರೆಗೆ ಬಂಧಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬದಲಿಗೆ, ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ನಂತರ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ನಡುವೆ, ಲೈಂಗಿಕ ದೌರ್ಜನ್ಯದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದಿರುವ ಸಂತ್ರಸ್ತ ಮಹಿಳೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸೂಕ್ಷ್ಮ ಪ್ರಕರಣದಲ್ಲಿ ಪೊಲೀಸರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
