
ಯಶ್ರ ಮುಂದಿನ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’(Toxic), ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಅಲ್ಲ, ಇದೊಂದು ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಹೇಳಲಾಗುತ್ತಿದೆ. ಭಾರಿ ದೊಡ್ಡ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಹಾಲಿವುಡ್ನ ತಂತ್ರಜ್ಞರು ಸಹ ಕೈ ಜೋಡಿಸಿದ್ದಾರೆ. ಆಶ್ಚರ್ಯವೆಂಬಂತೆ ಇದೀಗ ಕನ್ನಡದ ನಟಿಯೊಬ್ಬರು ಟಾಕ್ಸಿಕ್ ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಾರಿನಲ್ಲಿ ನಟಿ ಸವಾರಿ: ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಸರ್ಕಾರಿ ಕಾರು ಬಳಸಿದ ನಟಿ
ಇಲ್ಲಿಯವರೆಗೆ, ಯಶ್ ಹೊರತುಪಡಿಸಿ, ಕನ್ನಡದ ಯಾವ ಪ್ರಮುಖ ಕಲಾವಿದರೂ ಸಿನಿಮಾದಲ್ಲಿ ಇರುವುದಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ, ಇದೀಗ ಕನ್ನಡದ ಪ್ರತಿಭಾನ್ವಿತ ನಟಿ ರುಕ್ಮಿಣಿ ವಸಂತ್(Rukmini Vasanth) ಅವರು ‘ಟಾಕ್ಸಿಕ್’ ತಂಡಕ್ಕೆ ಸೇರಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಈಗಾಗಲೇ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ( Kiara Advani)ಮತ್ತು ನಟಿ ನಯನತಾರಾ(Nayanthara) ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಈಗ ರುಕ್ಮಿಣಿ ವಸಂತ್ ಅವರ ಆಗಮನ ಸಿನಿಮಾಗೆ ಇನ್ನಷ್ಟು ಮೆರುಗು ತಂದಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ರುಕ್ಮಿಣಿ, ಈಗ ದೊಡ್ಡ ಮಟ್ಟದ ಸಿನಿಮಾದ ಭಾಗವಾಗಿದ್ದಾರೆ.
ವರದಿಗಳ ಪ್ರಕಾರ, ರುಕ್ಮಿಣಿ ಈಗಾಗಲೇ ತಮ್ಮ ಪಾತ್ರದ ಕೆಲವು ಭಾಗಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅವರದ್ದು ಬಹಳ ದೊಡ್ಡ ಪಾತ್ರವಲ್ಲದಿದ್ದರೂ, ಕಥೆಗೆ ಬಹಳ ಮುಖ್ಯವಾದ ಪಾತ್ರವಾಗಿದೆ ಎನ್ನಲಾಗಿದೆ. ಆದರೂ, ‘ಟಾಕ್ಸಿಕ್’ ಚಿತ್ರತಂಡ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕಿದೆ.
ಇದನ್ನೂ ಓದಿ: Blood Pressure: ರಕ್ತದೊತ್ತಡವನ್ನು ಹಗುರವಾಗಿ ಪರಿಗಣಿಸಬೇಡಿ, ನಿಮ್ಮ ಜೀವವೇ ಹೋಗುತ್ತೆ
ಮಲಯಾಳಂ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas)ಅವರ ನಿರ್ದೇಶನದ ಈ ಚಿತ್ರದಲ್ಲಿ ಹಾಲಿವುಡ್ ನಟರಾದ ಕಿಲಿ ಪೌಲ್, ಡಾರೆಲ್ ಡಿಸಿಲ್ವಾ, ಮತ್ತು ಭಾರತದ ತಾರಾ ಸತಾರಿಯಾ, ಹುಮಾ ಖುರೇಷಿ, ಅಮಿತ್ ತಿವಾರಿ ಸಹ ನಟಿಸುತ್ತಿದ್ದಾರೆ. ಹಾಲಿವುಡ್ನ ಸ್ಟಂಟ್ ಕೋರಿಯೋಗ್ರಾಫರ್ ಜೆಜೆ ಪೆರ್ರಿ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಜೆರೆಮಿ ಸ್ಟ್ಯಾಕ್ ಮತ್ತು ಅನಿರುದ್ಧ್ ರವಿಚಂದ್ರನ್ ಹೊತ್ತಿದ್ದಾರೆ.
ಸಿನಿಮಾದ ಚಿತ್ರೀಕರಣ ಬೆಂಗಳೂರು, ಮುಂಬೈ, ತೂತುಕುಡಿ ಮತ್ತು ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಸಿನಿಮಾ 2026ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
