ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಮತ್ತು ವಿರೋಧಾತ್ಮಕ ವರದಿಗಳು ಬೆಳಕಿಗೆ ಬಂದಿವೆ. ದುರ್ಗಾಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದರೆ, ಇನ್ನೊಂದು ಪ್ರಕರಣದಲ್ಲಿ ಐದು ವರ್ಷಗಳ ಹಿಂದಿನ ಅತ್ಯಾಚಾರ ದೂರಿನ ಬಗ್ಗೆ ದೂರುದಾರ ಮಹಿಳೆಯೇ ಕೋರ್ಟ್ನಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ(West Bengal) ದುರ್ಗಾಪುರದ ಶೋಭಾವುರ ಸಮೀಪದ ಖಾಸಗಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ(Kolkata Rape Case) ನಡೆದಿರುವ ಆರೋಪ ಕೇಳಿಬಂದಿದೆ. ಒಡಿಶಾದ ಜಲೇಶ್ವರ ಮೂಲದ ಸಂತ್ರಸ್ತೆಯು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಘಟನೆ ವಿವರ:
ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಸಂತ್ರಸ್ತೆ ತನ್ನ ಪುರುಷ ಸ್ನೇಹಿತನೊಂದಿಗೆ ಕಾಲೇಜು ಕ್ಯಾಂಪಸ್ನಿಂದ ಹೊರಗೆ ಹೋಗಿ ಮರಳಿ ಬರುತ್ತಿದ್ದಾಗ, ಒಬ್ಬ ದುಷ್ಕರ್ಮಿ ಆಕೆಯನ್ನು ಹಿಡಿದು ಆಸ್ಪತ್ರೆಯ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.(Kolkata Rape Case)
ಈ ಘಟನೆಯು ಈ ವರ್ಷದ ಆರಂಭದಲ್ಲಿ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಜೂನಿಯರ್ ವೈದ್ಯೆ ಮೇಲಿನ ಅತ್ಯಾಚಾರ(Kolkata Rape Case) ಮತ್ತು ಕೊಲೆ ಪ್ರಕರಣದ ಕಹಿ ನೆನಪನ್ನು ಮತ್ತೆ ನೆನಪಿಸುತ್ತದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿಯ ತಂದೆಯ ಹೇಳಿಕೆಯ ಪ್ರಕಾರ ಮಗಳು ಪಾನಿಪೂರಿ ತಿನ್ನಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದಿದ್ದಾರೆ. ಪೊಲೀಸರು ಸದ್ಯ ವಿದ್ಯಾರ್ಥಿನಿಯ ಸ್ನೇಹಿತ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಬಹು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ.
ಅತ್ಯಾಚಾರ ಕೇಸ್ನಲ್ಲಿ ಘಟನೆ ನೆನಪಿಲ್ಲ ಎಂದ ಸಂತ್ರಸ್ತೆ’:
ಐದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣವೊಂದು ಕೋಲ್ಕತ್ತಾದಲ್ಲಿ ಆಘಾತಕಾರಿ ತಿರುವು ಪಡೆದುಕೊಂಡಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಆದರೆ ಈಗ ಮಹಿಳೆಯೇ, ನ್ಯಾಯಾಲಯದಲ್ಲಿ “ದೂರು ಕೊಟ್ಟಿದ್ದೆ ನೆನಪಿಲ್ಲ” ಎಂದು ಹೇಳಿಕೆ ನೀಡಿ, ಇಡೀ ಪ್ರಕರಣಕ್ಕೆ ನಾಟಕೀಯ ಅಂತ್ಯ ನೀಡಿದ್ದಾರೆ.(Kolkata Rape Case)
2020ರಲ್ಲಿ ಕೋಲ್ಕತ್ತಾದ ವ್ಯಕ್ತಿಯೊಬ್ಬರ ವಿರುದ್ಧ ಮಹಿಳೆಯು ಅತ್ಯಾಚಾರ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದರು. ಈ ಆರೋಪದ ಮೇರೆಗೆ, ಆರೋಪಿಯು ವಿಚಾರಣಾಧೀನ ಕೈದಿಯಾಗಿ 51 ದಿನಗಳ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ನ್ಯಾಯಾಲಯದಲ್ಲಿ ವಿವಾದಾತ್ಮಕ ಹೇಳಿಕೆ:
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಾಗ, ದೂರುದಾರ ಮಹಿಳೆಯು ತಮ್ಮ ಹಿಂದಿನ ಹೇಳಿಕೆಯಿಂದ ಸಂಪೂರ್ಣವಾಗಿ ಹಿಂದೆ ಸರಿದರು ‘ನಾನು ಈ ಬಗ್ಗೆ ದೂರು ನೀಡಿದ್ದು ನೆನವೇ ಇಲ್ಲ ಬಹುಶಃ ತಪ್ಪು ತಿಳುವಳಿಕೆ ಅಥವಾ ಗೊಂದಲದಿಂದಾಗಿ ನಾನು ಎಫ್ಐಆರ್ ದಾಖಲಿಸಿರುವುದಾಗಿ ಈಗ ಅನ್ನಿಸುತ್ತಿದೆ” ಎಂದು ಮಹಿಳೆ ನ್ಯಾಯಪೀಠಕ್ಕೆ ತಿಳಿಸಿದರು
ದೂರುದಾರೆಯ ಈ ವಿವಾದಾತ್ಮಕ ಹೇಳಿಕೆ ಹಾಗೂ ಪ್ರಾಸಿಕ್ಯೂಷನ್ (ಸರ್ಕಾರಿ ಪರ ವಕೀಲರು) ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದ ಕಾರಣ, ನ್ಯಾಯಾಲಯವು ಅಂತಿಮವಾಗಿ ಆರೋಪಿಯನ್ನು ದೋಷಮುಕ್ತಗೊಳಿಸಿ ಖುಲಾಸೆ ಮಾಡಿತು.
ಯಾವುದೇ ಅಪರಾಧ ಮಾಡುತ್ತಿದ್ದರು ಸುಳ್ಳು ಅಥವಾ ಆಧಾರವಿಲ್ಲದ ದೂರಿನ ಕಾರಣದಿಂದ ವ್ಯಕ್ತಿಯೊಬ್ಬ 51 ದಿನಗಳ ಕಾಲ ಜೈಲಿನಲ್ಲಿ ಕಳೆಯ ಬೇಕಾಯಿತು ಎಂಬುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
