Monalisa Bhosle
Monalisa Bhosale Marrige :ಇತ್ತೀಚೆಗೆ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ತಮ್ಮ ಆಕರ್ಷಕ ವೀಡಿಯೊ ಹಾಗೂ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದವರು ಮೊನಾಲಿಸಾ ಭೋಸೆ. ಕುಂಭಮೇಳದ ಭಕ್ತಿ ಪರವಶತೆಯ ನಡುವೆ ಇವರ ಗ್ಲಾಮರಸ್ ನೋಟ ನೆಟ್ಟಿಗರ ಗಮನ ಸೆಳೆದಿತ್ತು. ಆದರೆ, ಈಗ ಮೊನಾಲಿಸಾ ಕೇವಲ ವೀಡಿಯೊಗಳಿಗಾಗಿ ಸುದ್ದಿಯಲ್ಲಿಲ್ಲ, ಬದಲಿಗೆ ತಮ್ಮ ಜೀವನದ ಪ್ರಮುಖ ನಿರ್ಧಾರವೊಂದರ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಫರ್ಮಾನ್ ಖಾನ್ ಅವರೊಂದಿಗೆ ಕೇರಳದಲ್ಲಿ ಸದ್ದಿಲ್ಲದೆ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.Monalisa Bhosale Marrige
ದೇವಸ್ಥಾನದಲ್ಲಿ ಸರಳ ವಿವಾಹ:
ವರದಿಗಳ ಪ್ರಕಾರ, ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಕೇರಳದ
ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ. ಯಾವುದೇ ಅದ್ಧೂರಿ ತೋರ್ಪಡಿಕೆ ಇಲ್ಲದೆ, ಕೇವಲ ಅಪ್ಪರ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ. ಮದುವೆಯ ಉಡುಪಿನಲ್ಲಿ ದೇವಸ್ಥಾನದ ಆವರಣದಲ್ಲಿರುವ ದಂಪತಿಗಳ ಫೋಟೋಗಳು ಈಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ಇದು ಅಂತರ್ಧಮೀ್ರಯ ವಿವಾಹವಾದ್ದರಿಂದ ಸಹಜವಾಗಿಯೇ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಕುಟುಂಬದ ವಿರೋಧ ಮತ್ತು ಪೊಲೀಸ್ ರಕ್ಷಣೆ:
ಈ ವಿವಾಹಕ್ಕೆ ಕುಟುಂಬದ ಕಡೆಯಿಂದ ತೀವ್ರ ವಿರೋಧವಿತ್ತು ಎನ್ನಲಾಗಿದೆ. ಪ್ರೀತಿಯನ್ನು ಉಳಿಸಿಕೊಳ್ಳಲು ಮನೆಯವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿರುವ ಈ ಜೋಡಿ, ಈಗ ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ. ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಆತಂಕದಿಂದಾಗಿ, ದಂಪತಿಗಳು ಕೇರಳ ಪೊಲೀಸರನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರೀತಿಗಾಗಿ ಸಂಪ್ರದಾಯ ಮತ್ತು ಕುಟುಂಬದ ಕಟ್ಟುಪಾಡುಗಳನ್ನು ಮೀರಿ ನಿಂತಿರುವ ಇವರ ಧೈರ್ಯದ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:
ಸೋಷಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಅವರ ಈ ನಡೆಯ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕೆಲವರು “ಪ್ರೀತಿಗೆ ಧರ್ಮದ ಹಂಗಿಲ್ಲ, ಅವರ ಜೀವನ ಅವರ ಇಷ್ಟ” ಎಂದು ಬೆಂಬಲ ಸೂಚಿಸುತ್ತಿದ್ದರೆ, ಇನ್ನೂ ಕೆಲವರು “ಸನಾತನ ಧರ್ಮದ ಕುಂಭಮೇಳದಲ್ಲಿ ವೈರಲ್ ಆದವರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ” ಎಂದು ಟೀಕಿಸುತ್ತಿದ್ದಾರೆ. ಒಟ್ಟಿನಲ್ಲಿ, ಕುಂಭಮೇಳದ ಮೂಲಕ ಖ್ಯಾತಿ ಪಡೆದಿದ್ದ ಈ ಯುವತಿ ಈಗ ತನ್ನ ವೈಯಕ್ತಿಕ ಬದುಕಿನ ಕ್ರಾಂತಿಕಾರಿ ನಿರ್ಧಾರದಿಂದಾಗಿ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
NEWS CREDIT: ಶ್ರೀನಿಧಿ ಹೆಚ್. ಜಿ.
