Accident in Tumkur
ತುಮಕೂರು: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ ಊರಿಗೆ ಮರಳುತ್ತಿದ್ದ ಭಕ್ತರ ತಂಡವೊಂದು ಭೀಕರ ರಸ್ತೆ ಅಪಘಾತಕ್ಕೆ (Fatal Road Accident) ಈಡಾಗಿದ್ದು, ಏಳು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರು (Tumkur) ಜಿಲ್ಲೆಯ ಕೋರಾ(Kora) ಸಮೀಪ ನಡೆದಿದೆ. ಕೊಪ್ಪಳ ಜಿಲ್ಲೆಯ(Koppal district) ಯಲಬುರ್ಗಾ ತಾಲೂಕಿನ ಭಕ್ತರಿದ್ದ ಕ್ರೂಸರ್ ವಾಹನವು ರಾಷ್ಟ್ರೀಯ ಹೆದ್ದಾರಿ 48ರಲ್ಲಿ (National Highway 48) ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ (Collision). ಡಿಕ್ಕಿಯ ರಭಸಕ್ಕೆ ಕ್ರೂಸರ್(cruiser) ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಸಾವು-ನೋವು ಸಂಭವಿಸಿದೆ.
ಇದನ್ನೂ ಓದಿ: Gwalior Rape and Murder Case: ಸತ್ತಾಕೆ ಹೇಳಿದ ಸತ್ಯ ಕಥೆ; ಹಂತಕನಿಗೆ ಉರುಳಾದ ಹಸಿದ ಹೊಟ್ಟೆಯ ಕೊನೆಯ ತುತ್ತು..!
ಈ ಭೀಕರ ಅಪಘಾತದಲ್ಲಿ (Major Accident) ಯಲಬುರ್ಗಾದ ಸಾಕ್ಷಿ (7 ವರ್ಷ), ವೆಂಕಟೇಶಪ್ಪ (30 ವರ್ಷ), ಮಾರತಪ್ಪ (35 ವರ್ಷ) ಹಾಗೂ ಗವಿಸಿದ್ದಪ್ಪ (40 ವರ್ಷ) ಎಂಬುವವರು ದುರ್ಮರಣಕ್ಕೀಡಾಗಿದ್ದಾರೆ. ಮೃತರೆಲ್ಲರೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದವರಾಗಿದ್ದು (Koppal Yelburga Residents), ಶಬರಿಮಲೆಗೆ ಹೋಗಿ ಮನೆಗೆ ಮರಳುವ ಮುನ್ನವೇ ವಿಧಿ ಅಟ್ಟಹಾಸ ಮೆರೆದಿದೆ. ಪವಿತ್ರ ಯಾತ್ರೆ ಮುಗಿಸಿ ಪುನೀತರಾಗಿ ಮನೆಗೆ ಮರಳುತ್ತಿದ್ದ ಇವರ ಪಯಣ ಸಾವಿನ ದಾರಿಯಾಗಿ ಬದಲಾಗಿದ್ದು, ಇಡೀ ಗ್ರಾಮದಲ್ಲಿ ಶೋಕ ಸಾಗರ ಮುಳುಗಿದೆ.
ಘಟನಾ ಸ್ಥಳಕ್ಕೆ ಕೋರಾ ಪೊಲೀಸ್ ಠಾಣೆಯ (Kora Police Station) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ (Police Case Registered), ಹೆದ್ದಾರಿಗಳಲ್ಲಿ ಅಜಾಗರೂಕತೆಯಿಂದ ವಾಹನಗಳನ್ನು ನಿಲ್ಲಿಸುವುದು ಇಂತಹ ಭೀಕರ ಅಪಘಾತಗಳಿಗೆ (Highway Accidents) ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು(Tumkur) ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
