ತಿಪಟೂರು: ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲುಷಿತ ನೀರು ಸೇವಿಸಿ ಉಂಟಾದ ಅವಘಡ ಮತ್ತೆ ಇನ್ನೆಲ್ಲೂ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು ತಿಪಟೂರು ತಾಲ್ಲೂಕಿನಾದ್ಯಂತ ಶುದ್ದ ಕುಡಿಯುವ ನೀರು ಪೂರೈಸುವಂತೆ ಗ್ರಾಮಪಂಚಾಯಿತಿ ಸಿಬ್ಬಂದಿಗಳಿಗೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಸುದರ್ಶನ್ ತಿಳಿಸಿದರು.(Tiptur News)
ತಿಪಟೂರು(Tiptur News) ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಎಂ ಸುದರ್ಶನ್ ಅವರು ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಅವರು ಕುಡಿಯುವ ನೀರು, ನೈರ್ಮಲ್ಯತೆ, ನೀರಿನ ಗುಣಮಟ್ಟ ಪರಿಶೀಲನೆ ನಡೆಸಿ ಹದಿನೈದು ದಿನಕ್ಕೊಮ್ಮೆ ತಾಲ್ಲೂಕು ಪಂಚಾಯಿತಿಗೆ ವರದಿ ಸಲ್ಲಿಸುವಂತೆ ಪಿಡಿಒ, ವಾಟರ್ ಮ್ಯಾನ್ ಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು. ತಾಲ್ಲೂಕಿನಾದ್ಯಂತ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸುಸ್ತಿತಿಯಲ್ಲಿರುವಂತೆ ನೋಡಿಕೊಳ್ಳಲು ಸೂಚಿಸಿದರು.
ಕುಡಿಯುವ ನೀರಿಗೆ ಕ್ಲೋರಿನೇಟೆಡ್ ಮಾಡಿದ ನಂತರ ನೀರು ಶುದ್ದವಾಗಿದ್ಯಾ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಸಾರ್ವಜನಿಕರಿಗೆ ಕುಡಿಯಲು ನೀಡಬೇಕು. ಇನ್ನು ಒಂದು ವಾಂತಿ ಬೇಧಿ ಪ್ರಕರಣ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
ತಾಲ್ಲೂಕಿನಾದ್ಯಂತ ನಡೆಯುವ ಎಲ್ಲಾ ಗ್ರಾಮಗಳ ಜಾತ್ರೆಗಳಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆಹಾರ ಮತ್ತು ಪ್ರಸಾದ ವಿತರಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಿಳಿಸಬೇಕು. ಚಿರತೆ ಪ್ರತ್ಯಕ್ಷವಾಗುವ ಘಟನೆಗಳು ಹೆಚ್ಚಾಗುತ್ತಿದ್ದು ಜನ ನಿಬಿಡ ಪ್ರದೇಶಗಳಲ್ಲಿ ಬೇಲಿಗಳನ್ನು ತೆರವುಮಾಡಬೇಕು. ಗ್ರಾಮಸ್ಥರಲ್ಲಿ ಪ್ರಚಾರ ಹಾಗೂ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಬೀದಿನಾಯಿಗಳಿಗೆ ರೇಬಿಸ್ ಇಂಜೆಕ್ಷನ್ ಹಾಕಿಸಬೇಕು. ಬೀದಿನಾಯಿಗಳೊಂದಿಗೆ ಮಕ್ಕಳು ಹಾಗೂ ಸಾರ್ವಜನಿಕರು ಹೇಗೆ ವರ್ತಿಸಬೇಕು ಎಂಬುರದ ಕುರಿತು ಜಾಗೃತಿ ಮೂಡಿಸಬೇಕು.(Tiptur News)
ತಾಲ್ಲೂಕು ವೈದ್ಯಾಧಿಕಾರಿ ಡಾ. ಕೇಶವ ಮೂರ್ತಿ ಅವರು ಪಂಚಾಯಿತಿ ಸಿಬ್ಬಂದಿಗಳಿಗೆ ನೈರ್ಮಲ್ಯದ ಕುರಿತು ಸೂಕ್ತ ಮಾಹಿತಿ ನೀಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಾಟರ್ ಮ್ಯಾನ್ ಗಳು, ಆಶಾ ಕಾರ್ಯಕರ್ತೆಯರು ಆರೋಗ್ಯಾಧಿಕಾರಿಗಳು, ಹಾಗೂ ತಾಲ್ಲೂಕು ಐಇಸಿ ಸಂಯೋಜಕರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು(Tiptur News)
