Reading Time: < 1 minute
ತುಮಕೂರು : ಕಳೆದ 28 ವರ್ಷಗಳಿಂದ ಸಾಮಾಜಿಕ ಮತ್ತು ಸಾಹಿತ್ಯಿಕ ರಂಗದಲ್ಲಿ ಸಕ್ರಿಯವಾಗಿರುವ ಜಗಜ್ಯೋತಿ ಕಲಾವೃಂದವು 2025ನೇ ಸಾಲಿನ ಅಖಿಲ ಭಾರತ ಮಟ್ಟದ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಸಾಹಿತ್ಯ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿ ಕಥಾ ವಿಭಾಗದಲ್ಲಿ ಪ್ರಜ್ಞಾ ಮತ್ತಿಹಳ್ಲಿ ಹಾಗೂ ಕವನ ವಿಭಾಗದಲ್ಲಿ ತೇಜಾವತಿ ಎಚ್. ಡಿ.(Tejavathi H.D.) ಪ್ರಶಸ್ತಿಗೆ ಭಾಜನಾರಾಗಿದ್ದಾರೆ.
ತೇಜಾವತಿ ಎಚ್. ಡಿ (Tejavathi H.D.) ಮೂಲತಃ ತುಮಕೂರಿನವರೇ ಆಗಿದ್ದು, ಮೂರು ಕವನ ಸಂಕಲನ ಹೊರ ತಂದಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಲೇಖನ, ವಿಮರ್ಶೆ, ಕವಿತೆಗಳು ಪ್ರಕಟವಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
