ಬೆಂಗಳೂರು: ಸ್ತ್ರೀರೋಗ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿನ ”ಇತ್ತೀಚಿನ ಅವಿಷ್ಕಾರಗಳನ್ನು” ಜಗತ್ತಿಗೆ ಪರಿಚಯಿಸಲು, 25ನೇ ವಾರ್ಷಿಕ ರೇಜ್ ಸಮ್ಮೇಳನ ಮತ್ತು ಕಾರ್ಯಾಗಾರವನ್ನು (Rage Conference) 2025 ನಗರದಲ್ಲಿ ಆಯೋಜಿಸಲಾಗಿತ್ತು. ಸೆಪ್ಟೆಂಬರ್ 20 ಮತ್ತು 21 ರಂದು ನಗರದ ಪ್ರತಿಷ್ಠಿತ ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ನಡೆದ ಈ ಸಮ್ಮೇಳನದಲ್ಲಿ, ದೇಶ-ವಿದೇಶಗಳ ನೂರಾರು ತಜ್ಞ ವೈದ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿತ್ತು.
ಬೆಂಗಳೂರಿನ ಅಲ್ಟಿಯಸ್ ಆಸ್ಪತ್ರೆಯ ನಿರ್ದೇಶಕರೂ ಹಾಗೂ ಪ್ರಖ್ಯಾತ ಗೈನಕ್ ಎಂಡೋಸ್ಕೋಪಿ ತಜ್ಞರೂ ಆದ ಡಾ. ಬಿ. ರಮೇಶ್ ಅವರು ಈ ಸಮ್ಮೇಳನದ ವ್ಯವಸ್ಥಾಪಕ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತಿದ್ದರು.
ಬಡರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆಯ ಕೊಡುಗೆ
ಈ ಬೆಳ್ಳಿ ಹಬ್ಬದ ಸಮ್ಮೇಳನದ ವಿಶೇಷತೆಯೆಂದರೆ, ಸಮಾಜಮುಖಿ ಕಾರ್ಯಕ್ರಮದ ಅಡಿಯಲ್ಲಿ 35 ಬಡರೋಗಿಗಳಿಗೆ ಉಚಿತವಾಗಿ ಅತ್ಯಾಧುನಿಕ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಆರೋಗ್ಯ ಶಿಬಿರಗಳ ಮೂಲಕ ಆಯ್ಕೆಯಾದ ರೋಗಿಗಳಿಗೆ ಈ ಸೌಲಭ್ಯ ದೊರೆಯಲಿದೆ. ಗರ್ಭಕೋಶದ ಫೈಬ್ರಾಯ್ಡ್ ಗಡ್ಡೆಗಳು, ಕ್ಯಾನ್ಸರ್, ಎಂಡೊಮೆಟ್ರಿಯಾಸಿಸ್ ಮತ್ತು ಬಂಜೆತನದಂತಹ ಸಂಕೀರ್ಣ ಸಮಸ್ಯೆಗಳಿಗೆ ಅಲ್ಟಿಯಸ್ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ.(Rage Conference)
“ರೋಗಿಯ ದೇಹದ ಗಳಿಗೆ ಕನಿಷ್ಠ ಹಾನಿ ಮತ್ತು ಶೀಘ್ರ ಚೇತರಿಕೆಯೇ ಲ್ಯಾಪರೋಸ್ಕೋಪಿಯ ಪ್ರಮುಖ ಉದ್ದೇಶ. ಈ ಮೂಲಕ ಬಡರೋಗಿಗಳಿಗೆ ಉತ್ತಮಗುಣಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ತಲುಪಿಸುವುದು ನಮ್ಮ ಗುರಿ,” ಎಂದು ಡಾ. ಬಿ. ರಮೇಶ್ ತಿಳಿಸಿದರು.
ಸುರಕ್ಷಿತ ಎಂಡೋಸ್ಕೋಪಿಯೇ ಧೈಯ
1948ರಲ್ಲಿ ಸ್ಥಾಪನೆಯಾದ ‘ರೇಜ್’ (Rage Conference), ಭಾರತದಲ್ಲಿ ಲ್ಯಾಪರೋಸ್ಕೋಪಿಯ ಪ್ರವರ್ತನೆಗೆ ಶ್ರಮಿಸುತ್ತಿರುವ ಅತಿ ಹಳೆಯ ಸ್ತ್ರೀರೋಗ ತಜ್ಞರ ಎಂಡೋಸ್ಕೋಪಿ ಸೊಸೈಟಿಯಾಗಿದೆ. “ಸುರಕ್ಷಿತ ಎಂಡೋಸ್ಕೋಪಿ” ಎಂಬುದು ಇದರ ಮೂಲ ಧೈಯ.
ಈ ಕುರಿತು ಮಾತನಾಡಿದ ಡಾ. ರಮೇಶ್, “ಲ್ಯಾಪರೋಸ್ಕೋಪಿಯಲ್ಲಿ ಯಶಸ್ಸು ಸಾಧಿಸಲು ನಿರಂತರ ತರಬೇತಿ, ಬದ್ಧತೆ ಮತ್ತು ಸಮರ್ಪಣಾ ಮನೋಭಾವದ ತಂಡ ಅತ್ಯಗತ್ಯ. ಅರವಳಿಕೆ ತಜ್ಞರು, ಶಸ್ತ್ರಚಿಕಿತ್ಸಕರು, ಸಹಾಯಕರು ಮತ್ತು ನುರಿತ ನರ್ಸ್ಗಳನ್ನೊಳಗೊಂಡ ತಂಡದಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯ.
