ಪಾಕಿಸ್ತಾನ: ಸದಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನದ ನೈಋತ್ಯ ನಗರವಾದ ಕ್ವಟ್ಕಾ ಇಂದು ಮಧ್ಯಾಹ್ನ ದಿಢೀರ್ ಸ್ಫೋಟದ ಶಬ್ದದಿಂದ ಬೆಚ್ಚಿಬಿದ್ದಿದೆ.(Bomb Blast in Pak) ಪ್ಯಾರಾಮಿಲಿಟರಿ ಪಡೆಗಳ ಪ್ರಮುಖ ಕಚೇರಿಯ ಹೊರಗೆ ನಡೆದ ಈ ಘೋರ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಜೀವಗಳು ಬಲಿಯಾಗಿವೆ ಮತ್ತು ಸುಮಾರು 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಗ್ರರು ಮತ್ತು ಸೇನೆಯ ನಡುವಿನ ಗುಂಡಿನ ಚಕಮಕಿ
ಮಧ್ಯಾಹ್ನದ ಸಮಯದಲ್ಲಿ ಕೈಟ್ನಾದ ಜರ್ಘುನ್ ರಸ್ತೆಯಲ್ಲಿರುವ ಎಫ್ಸಿ (ಫ್ರಾಂಟಿಯರ್ ಕಾನ್ ಸ್ಟಾಬ್ಯುಲರಿ) ಪ್ರಧಾನ ಕಚೇರಿಯ ಎದುರು ಈ ಬಾಂಬ್ ಬ್ಲಾಸ್ಟ್ ಸಂಭವಿಸಿದೆ. ಭಯೋತ್ಪಾದಕರು ಅತ್ಯಂತ ಯೋಜಿತ ರೀತಿಯಲ್ಲಿ ಈ ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ.(Bomb Blast in Pak) ಮೂಲಗಳ ಪ್ರಕಾರ, ಆರು ಮಂದಿ ಉಗ್ರರು ಕಾರಿನಿಂದ ಇಳಿದು, ತಮ್ಮ ವಾಹನವನ್ನು ಸ್ಪೋಟಿಸುವ ಮೊದಲು, ನೇರವಾಗಿ ಸೇನಾ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿಗೆ ಇಳಿದಿದ್ದಾರೆ.
ಈ ಭೀಕರ ದಾಳಿಗೆ, ನಮ್ಮ ಭದ್ರತಾ ಪಡೆಗಳು ತಕ್ಷಣವೇ ಪ್ರತಿಕ್ರಿಯಿಸಿದ್ದು, ದಾಳಿಯಲ್ಲಿ ಭಾಗಿಯಾಗಿದ್ದ ಆರೂ ಜನ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಿನ್ ನಖಿ ದೃಢಪಡಿಸಿದ್ದಾರೆ. ಆದರೆ, ಅಷ್ಟರೊಳಗೆ ಸಂಭವಿಸಿದ ಸ್ಪೋಟದ ತೀವ್ರತೆ ಮೈಲುಗಳಷ್ಟು ದೂರದವರೆಗೂ ಕೇಳಿಸಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕದಿಂದ ತಿಳಿಸಿದ್ದಾರೆ
.
ಬಲಿಯಾದವರು ಸಾಮಾನ್ಯ ನಾಗರಿಕರು
ರಕ್ಷಣಾ ತಂಡಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಇಡೀ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಚರಣೆ ನಡೆಸಿದರು. ಈ ದುರಂತದಲ್ಲಿ ಗಾಯಗೊಂಡವರ ಮತ್ತು ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಾಂತೀಯ ಆರೋಗ್ಯ ಸಚಿವ ಬಖತ್ ಕಾಕರ್ ಅವರು ಘಟನೆಯ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. “ಉಗ್ರರ
ಗುರಿ ಭದ್ರತಾ ಪಡೆಗಳ ಪ್ರಧಾನ ಕಚೇರಿಯಾಗಿತ್ತು. ಆದರೆ, ದುರದೃಷ್ಟವಶಾತ್ ಈ ದಾಳಿಯಲ್ಲಿ ಹೆಚ್ಚು ಸಂಖ್ಯೆಯ ಅಮಾಯಕ ನಾಗರಿಕರೇ ಸಾವನ್ನಪ್ಪಿದ್ದಾರೆ.”
ಸದ್ಯಕ್ಕೆ ಯಾವುದೇ ಉಗ್ರ ಸಂಘಟನೆ ಈ ಹೇಯ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿಲ್ಲ. ಇಡೀ ಕ್ವಟಾ ನಗರ ಈ ದುರಂತದಿಂದ ಆಘಾತಕ್ಕೊಳಗಾಗಿದೆ. ಶಾಂತಿ ಮತ್ತು ಭದ್ರತೆಯನ್ನು ಕದಡುವ ಇಂತಹ ಪ್ರಯತ್ನಗಳು ಮನುಕುಲಕ್ಕೆ ಎಂದಿಗೂ ಅಕ್ಷಮ್ಯ ಎಂದು ಬಕಾತ್ ಕಾಕರ್ ಹೇಳಿದ್ದಾರೆ.
