ಪುತ್ತೂರು: ಶಾಲೆಯಿಂದ ಮರಳುವಾಗ ಹೆಜ್ಜೇನು ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂವರ ಪೈಕಿ ಓರ್ವ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.(Honeybee Attack)
ಪುತ್ತೂರು ತಾಲೂಕಿನ ಸೇಡಿಯಾವು ಸಮೀಪದ ಕೂಟೇಲು ಎಂಬಲ್ಲಿ ಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಪಡ್ನೂರು ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ, ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಇಶಾ (07) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಇನ್ನೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿಗಳ ರಕ್ಷಣೆಗೆ ತೆರಳಿದ ವ್ಯಕ್ತಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Robbery Attempt: ದರೋಡೆ ಯತ್ನ, ಟಿಟಿ ವಾಹನದ ಬಾಗಿಲಿಗೆ ಜಿಗಿದ ದುಷ್ಕರ್ಮಿಗಳು; ಚಾಲಕನ ಸಮಯಪ್ರಜ್ಞೆಯಿಂದ ಕುಮಟಾ ಕುಟುಂಬ ಸೇಫ್!
ಘಟನಾ ವಿವರ: ಅಕ್ಟೋಬರ್ 10 ರ ಸಂಜೆ ಕಿರಣ್ ಎಂಬವರ ಪುತ್ರಿ ಇಶಾ ಹಾಗೂ ಕಿಶೋರ್ ಎಂಬವರ ಪುತ್ರ 5ನೇ ತರಗತಿ ವಿದ್ಯಾರ್ಥಿ ಪ್ರತ್ಯೂಶ್ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಕೂಟೇಲು ಸಮೀಪ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ ಎನ್ನಲಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳ ಕಿರುಚಾಟ ಕೇಳಿ ರಕ್ಷಣೆಗೆ ಬಂದಿದ್ದ ಸ್ಥಳೀಯ ನಿವಾಸಿ ನಾರಾಯಣ ಎಂಬವರ ಮೇಲು ಹೆಜ್ಜೇನು ದಾಳಿಯಾಗಿದೆ.(Honeybee attack)
ಕೂಡಲೇ ನಾರಾಯಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ತೀರಾ ಅಸ್ವಸ್ಥಗೊಂಡ ಇಶಾ ಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರಿಳೆದಿದ್ದಾಳೆ ಎಂದು ತಿಳಿದುಬಂದಿದೆ.
ಇತ್ತ ಗಂಭೀರ ಗಾಯಗೊಂಡ ಮತ್ತೋರ್ವ ವಿದ್ಯಾರ್ಥಿಯನ್ನೂ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ರಕ್ಷಣೆಗೆ ಧಾವಿಸಿದ್ದ ನಾರಾಯಣ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
