Pakistan & America Deal: ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಗಟ್ಟಿಯಾಗುತ್ತಿರುವುದು ಜಗತ್ತಿನ ಗಮನ ಸೆಳೆದಿದೆ. ಆದರೆ ಇದು ಭಾರತದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಂತರಾಷ್ಟ್ರೀಯ ಸಂಬಂಧಗಳ ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ರಕ್ಷಣಾ ಒಪ್ಪಂದದ(Pakistan & America Deal) ಭಾಗವಾಗಿ ಅಮೆರಿಕಾವು ಪಾಕಿಸ್ತಾನಕ್ಕೆ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು (Advanced Medium Range Air-to-Air Missiles – AMRAAM) ಒದಗಿಸಲು ಸಿದ್ಧತೆ ನಡೆಸಿದೆ. ಇದು ಒಂದು ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ (Air-to-Air Missile) ಆಗಿದ್ದು ಇದರ ಹೆಸರು AIM 120 ಆಗಿದೆ.
ಅಮೆರಿಕಾದ ಯುದ್ಧ ಇಲಾಖೆ (Department of War ಹಿಂದೆ ರಕ್ಷಣಾ ಇಲಾಖೆ) ಹೊರಡಿಸಿದ ಪ್ರಕಟಣೆಯ ಪ್ರಕಾರ AMRAAM ಕ್ಷಿಪಣಿಗಳ ಖರೀದಿದಾರರ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರಿದೆ. ಈ ಕ್ಷಿಪಣಿಗಳನ್ನು ಪಾಕಿಸ್ತಾನ ವಾಯುಸೇನೆಯ (PAF) F-16 ಫಾಲ್ಕನ್ ಯುದ್ಧ ವಿಮಾನಗಳಲ್ಲಿ ಅಳವಡಿಸಲಾಗುತ್ತದೆ.
ಭಾರತದ ಬಾಲಾಕೋಟ್ ದಾಳಿ ನಂತರ ಬಳಕೆಯಾದ ಕ್ಷಿಪಣಿ:
ಪಾಕಿಸ್ತಾನವು ತನ್ನ ಪ್ರಧಾನಿ ಶೆಹಬಾಜ್ ಷರೀಫ್(Shehabaz Shariff) ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಅಧಿಕಾರಾವಧಿಯಲ್ಲಿ ಅಮೆರಿಕಾಕ್ಕೆ ಅಪರೂಪದ ಖನಿಗಳನ್ನು ರಫ್ತು ಮಾಡುತ್ತಿರುವುದು ಅವರದ್ದೇ ದೇಶದದಲ್ಲಿ ‘ಟೀಕೆಗೆ ಗುರಿಯಾಗಿತ್ತು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ಶೆಕ್ ಎ ಇನ್ನಾಥ್ (PT) ಕೂಡ ಈ ಒಪ್ಪಂದದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದೆ.
ಪಾಕ್ ಪತ್ರಿಕೆಗಳ ವರದಿಯ ಪ್ರಕಾರ, 2019ರ ಬಾಲಾಕೋಟ್ ಏರ್ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವಾಯು ಘರ್ಷಣೆಗಳ ಸಂದರ್ಭದಲ್ಲಿ ಪಾಕಿಸ್ತಾನ ವಾಯುಸೇನೆ(Pakistan Air Force) ಈ AMRAAM ಕ್ಷಿಪಣಿಗಳನ್ನು ಬಳಸಿತ್ತು ಎಂದು ವರದಿಯಾಗಿದೆ.
ಪುಲ್ವಾಮಾ ಭಯೋತ್ಪಾದಕ ದಾಳಿಗೆ(Pulwama Terror Attack) ಪ್ರತೀಕಾರವಾಗಿ, 2019ರ ಫೆಬ್ರವರಿಯಲ್ಲಿ ಭಾರತವು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್ನಲ್ಲಿರುವ(Balkot) ಜೈಶ್-ಎ ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿತ್ತು. ಈ ದಾಳಿಯಲ್ಲಿ ಜೈಶ್ನ ಹಿರಿಯ ಕಮಾಂಡರ್ಗಳು, ತರಬೇತುದಾರರು ಸೇರಿದಂತೆ 300ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದರು.
ರಕ್ಷಣಾ ಒಪ್ಪಂದದ ವಿವರಗಳು (Pakistan & America Deal)
ಕ್ಷಿಪಣಿ ತಯಾರಕ ಸಂಸ್ಥೆ ರೇಥಿಯಾನ್ ಜೊತೆಗಿನ ಒಪ್ಪಂದಕ್ಕೆ(POK & America Deal) ಸೆಪ್ಟೆಂಬರ್ 30ರಂದು ಅಮೆರಿಕಾ ಯುದ್ಧ ಇಲಾಖೆ(American War Department) $41.6 ಮಿಲಿಯನ್ ಮೌಲ್ಯದ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯ ಭಾಗವಾಗಿ, AIM 120 ಕ್ಷಿಪಣಿಗಳ CB ಮತ್ತು D3 ಮಾದರಿಗಳನ್ನು ತಯಾರಿಸಲಾಗುತ್ತಿದೆ. ಪಾಕಿಸ್ತಾನ ಸೇರಿದಂತೆ ಇತರ ದೇಶಗಳ ಸೇರ್ಪಡೆಯಿಂದಾಗಿ ಈ ಒಪ್ಪಂದದ ಒಟ್ಟು ಮೌಲ್ಯವು $2.51 ಬಿಲಿಯನ್ ದಾಟಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬೃಹತ್ ಒಪ್ಪಂದದಲ್ಲಿ ಪಾಕಿಸ್ತಾನದ ಜೊತೆಗೆ ಬಹೇನ್, ಸೌದಿ ಅರೇಬಿಯಾ, ಇಟಲಿ, ನಾರ್ವೆ, ಸ್ಪೇನ್, ಕುವೈತ್, ಸ್ವೀಡನ್, ವಾನ್, ಕತಾರ್. ಓಮನ್. ಕೊರಿಯಾ, ಗ್ರೀಸ್, ಸ್ವಿಟ್ಸರ್ಲೆಂಡ್. ಪೋರ್ಚುಗಲ್, ಸಿಂಗಾಪುರ್, ಯುಕೆ, ಪೋಲೆಂಡ್, ಜರ್ಮನಿ, ಫಿನ್ಲ್ಯಾಂಡ್. ಅಸ್ಟ್ರೇಲಿಯಾ, ರೊಮೇನಿಯಾ, ನೆದರ್ಲ್ಯಾಂಡ್, ಜೆಕ್ ರಿಪಬ್ಲಿಕ್, ಜಪಾನ್, ಸ್ತೋವಾಕಿಯಾ, ಡೆನ್ಮಾರ್ಕ್, ಕೆನಡಾ, ಬೆಲ್ಕಿಯಂ, ಸೇರಿದಂತೆ ಹಲವು ದೇಶಗಳು ಸೇರಿವೆ ಈ ಕ್ಷಿಪಣಿಗಳ ವಿತರಣೆಯ ಕೆಲಸ ಮೇ 2030 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಪಾಕಿಸ್ತಾನಕ್ಕೆ ಎಷ್ಟು AMRAAM ಕ್ಷಿಪಣಿಗಳನ್ನು ಪೂರೈಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಬೆಳವಣಿಗೆಯು ಪಾಕ್ ವಾಯುಸೇನೆಯು ತನ್ನ F-16 ವಿಮಾನಗಳ ಪಡೆಯನ್ನು ನವೀಕರಿಸಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. AMRAAM ಕ್ಷಿಪಣಿಗಳು PAF ನಲ್ಲಿ ಕೇವಲ F-16 ಜೆಟ್ಗಳಿಗೆ ಮಾತ್ರ ಹೊಂದಿಕೆಯಾಗುತ್ತವೆ.
ಇದೇ ವರ್ಷ ಜುಲೈನಲ್ಲಿ ಪಾಕ್ ವಾಯುಸೇನೆಯ(Pakistan Air Force) ಮುಖ್ಯಸ್ಥ ಏರ್ ಮಾರ್ಷಲ್ ಝಹೀರ್ ಅಹ್ಮದ್ ಬಾಬರ್ ಅಮೆರಿಕಾದ ವಿದೇಶಾಂಗ ಇಲಾಖೆಗೆ(American Foreign Affair Department) ಭೇಟಿ ನೀಡಿದ್ದರು. ವರದಿಗಳ ಪ್ರಕಾರ ಹೊಸ AIM 120C8 ಮಾದರಿಯು ಅಮೆರಿಕಾದ ಸೇನೆಯು(American Army) ಬಳಸುವ ಅತ್ಯಾಧುನಿಕ AIM-120D AMRAAM ಕ್ಷಿಪಣಿಯ ರಫ್ತು ಆವೃತ್ತಿಯಾಗಿದೆ. ಪ್ರಸ್ತುತ ಪಾಕಿಸ್ತಾನವು ಹಳೆಯ AIM-12005 ಮಾದರಿಯನ್ನು ಬಳಸುತ್ತಿದ್ದು ಅದನ್ನು 2010ರಲ್ಲಿ ತನ್ನ F-16 ವಿಮಾನಗಳಿಗಾಗಿ ಸುಮಾರು 500 ಯುನಿಟ್ಗಳನ್ನು ಖರೀದಿಸಿತ್ತು.(POK & America Deal)
ಒಪ್ಪಂದದ ಹಿಂದಿನ ರಾಜಕೀಯ
‘ಆಪರೇಷನ್ ಸಿಂಧೂರ್(Opration Sindur) ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ(India & Pakistan) ನಡುವಿನ ಸಂಘರ್ಷವನ್ನು ಕಡಿಮೆ ಮಾಡಿ ಕದನ ವಿರಾಮಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಪಾಕಿಸ್ತಾನವು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಶ್ಲಾಘಿಸಿತ್ತು ಮತ್ತು ಅವರಿಗೆ ನೋಬೆಲ್ ಶಾಂತಿ ಬಹುಮಾನಕ್ಕೆ ನಾಮನಿರ್ದೇಶನ ಮಾಡುವ ಪ್ರಸ್ತಾಪವನ್ನೂ ಮಾಡಿತ್ತು.
ಆದರೆ, ಕದನ ವಿರಾಮವು ಕೇವಲ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ(Pakistan Army) ಕಾರ್ಯಾಚರಣೆಗಳ ಮಹಾ ನಿರ್ದೇಶಕರ (DGMOS) ನಡುವಿನ ನೇರ ಮಾತುಕತೆಗಳಿಂದಲೇ ಸಾಧ್ಯವಾಯಿತು ಎಂದು ಭಾರತವು ಸ್ಥಿರವಾಗಿ ಹೇಳುತ್ತಾ ಬಂದಿದೆ.
