ನವದೆಹಲಿ: ವಿಜಯದಶಮಿಯ ದಿನದಂದು ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಭಾರತೀಯ ಸೇನಾ ಮುಖ್ಯಸ್ಥರೂ ಇಬ್ಬರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಭಾರತದ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಪಾಕಿಸ್ತಾನ ಕೈ ಹಾಕಿದರೆ, ಆ ದೇಶದ ಭೌಗೋಳಿಕ ಸ್ಥಿತಿ ಬದಲಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು. ಗುರಾತ್ನಿಂದ ಕರಾಚಿ ಕಡೆಗೂ ದಾರಿಯಿದೆ ಎಂಬುದು ನೆನಪಿರಲಿ ಎಂದು ಪಾಕ್ ಗೆ ಹಿತವಚನ ನೀಡಿದ್ದರು.(Indian Army Warning)
ಆದರೆ, ಶುಕ್ರವಾರ (ಅಕ್ಟೋಬರ್ 3) ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಮತ್ತಷ್ಟು ತೀವ್ರ ಎಚ್ಚರಿಕೆ ನೀಡಿದ್ದಾರೆ.(Indian Army Warning) ಪಾಕಿಸ್ತಾನವು ದೇಶದ ಅಜೆಂಡಾವಾಗಿ ನಡೆಸುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸದೇ ಇದ್ದರೆ, ಈ ಬಾರಿ ಭಾರತ ಸಂಯಮ ಪಾಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. “ಮ್ಯಾಪ್ ನಿಂದಲೇ ಪಾಕಿಸ್ತಾನವನ್ನು ಅಳಿಸಿ ಹಾಕುತ್ತೇವೆ” ಎಂಬರ್ಥದಲ್ಲಿ ಅವರು ಎಚ್ಚರಿಕೆ ನೀಡಿದ್ದು, ಇದು ಸೇನೆಯ ಯೋಧರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ವ್ಯಕ್ತವಾಗಿದೆ.
“ಈ ಬಾರಿ ಆಪರೇಷನ್ ಸಿಂದೂರ್ 1.0ರಲ್ಲಿ ತೋರಿಸಿದಂತೆ ನಾವು ಸಂಯಮವನ್ನು ಕಾಯ್ದುಕೊಳ್ಳುವುದಿಲ್ಲ. ಈ ಸಲ ನಾವು ಏನಾದರೂ ಮಾಡಿದರೆ, ಪಾಕಿಸ್ತಾನವು ತನ್ನ ಭೌಗೋಳಿಕ ರೂಪವನ್ನು ಕಾಪಾಡಿಕೊಳ್ಳಬೇಕೋ ಅಥವಾ ಬೇಡವೋ ಎಂದು ಆಲೋಚಿಸುವಂತೆ ಮಾಡುತ್ತೇವೆ. ಪಾಕಿಸ್ತಾನವು ಈಗ ಇರುವಂತೆಯೇ ಭೂಗೋಳದಲ್ಲಿ ಉಳಿಯಬೇಕೆಂದರೆ, ಅದು ಭಾರತದ ವಿರುದ್ಧ ಮಾಡುತ್ತಿರುವ ಭಯೋತ್ಪಾದನೆಯನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ಜನರಲ್ ದ್ವಿವೇದಿ ಹೇಳಿದರು.(Indian Army Warning)
ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನವು ಮಿಲಿಟರಿ ವಲಯಗಳನ್ನು ವಿಸ್ತರಿಸುತ್ತಾ ಭಾರತದ ಭಾಗವನ್ನು ಕಬಳಿಸುವ ಕೃತ್ಯಗಳಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಒಂದು ವೇಳೆ ಪಾಕಿಸ್ತಾನ ಯಾವುದೇ ದುಸ್ಸಾಹಸ ಮಾಡಿದರೆ, ಗುಜರಾತ್ ನಿಂದ ಕರಾಚಿಗೆ ನೇರ ದಾರಿಯಿದೆ, ಆ ಪ್ರದೇಶವೇ ಧ್ವಂಸವಾಗುತ್ತದೆ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದು , ಭಾರತವು ಈ ಬಾರಿ ಗಟ್ಟಿಯಾಗಿ ಪ್ರತಿಕ್ರಿಯಿಸಲಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ‘ಮಧುರ ಕಥೆಗಳು’
ಭಾರತೀಯ ಯುದ್ಧ ವಿಮಾನಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಶುಕ್ರವಾರ ಬೆಳಗ್ಗೆಯೇ ಇಂಡಿಯನ್ ಏರ್ ಫೋರ್ಸ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಖಂಡಿಸಿದ್ದರು. ಅವು ಪಾಕಿಸ್ತಾನದ ‘ಮಧುರ ಕಲ್ಪನೆಗಳು’ (ಮನೋಹರ ಕಹಾನಿಯಾ) ಎಂದು ತಳ್ಳಿಹಾಕಿದರು.(Indian Army Warning)
“ನಮ್ಮ 15 ಯುದ್ಧ ವಿಮಾನಗಳನ್ನು ಅವರು (ಪಾಕಿಸ್ತಾನ) ಹೊಡೆದುರುಳಿಸಿದ್ದಾರೆಂದು ನಂಬಿದ್ದಾರೆ. ಅವರನ್ನು ಹಾಗೆಯೇ ನಂಬಲು ಬಿಡಿ. ಅವರು ಹಾಗೆ ಅಂದುಕೊಳ್ಳುವುದು ನಮಗೂ ಒಳ್ಳೆಯದೇ. ಅವರು ಮತ್ತೊಮ್ಮೆ ನಮ್ಮೊಂದಿಗೆ ಹೋರಾಡಲು ಬಂದಾಗ, ನಮ್ಮ ಬಳಿ 15 ವಿಮಾನಗಳು ಕಡಿಮೆ ಇವೆ ಎಂದು ನಿರೀಕ್ಷಿಸುತ್ತಾರೆ. ಆದ್ದರಿಂದ ನಿಜವಾಗಿಯೂ ಏನಾಯಿತು ಅಥವಾ ಎಷ್ಟು ನಷ್ಟವಾಯಿತು ಎಂದು ನಾನು ಏನನ್ನೂ ಹೇಳುವುದಿಲ್ಲ. ಅವರೇ ಸ್ವತಃ ಕಂಡುಹಿಡಿಯಲಿ” ಎಂದು ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ತೀಕ್ಷವಾಗಿ ಉತ್ತರಿಸಿದರು.
ಪಾಕಿಸ್ತಾನಕ್ಕೆ ಕಠಿಣ ದಿನಗಳು?
ಸರ್ ಕ್ರೀಕ್ ಪ್ರದೇಶದಲ್ಲಿ ಮಿಲಿಟರಿ ವಲಯಗಳ ವಿಸ್ತರಣೆ, ಜಮ್ಮು ಮತ್ತು ಕಾಶ್ಮೀರ ಗಡಿ ವಲಯದಲ್ಲಿ ಉಗ್ರರನ್ನು ನುಗ್ಗಿಸಲು ತಯಾರಿ ನಡೆಸುತ್ತಿರುವುದು ಮತ್ತು ಅಮೆರಿಕದ ಸಹಾಯ ಪಡೆಯುತ್ತಿರುವುದು -ಇವೆಲ್ಲವೂ ಒಂದು ದೊಡ್ಡ ಸಂಚಿನ ಭಾಗವಾಗಿರುವಂತೆ ತೋರುತ್ತಿದೆ. ಭಾರತವನ್ನು ಕೆಣಕಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಅನುಮಾನಗಳು ಈ ಮೂಲಕ ದೃಢವಾಗುತ್ತಿವೆ. ಈ ಹಿನ್ನೆಲೆಯಲ್ಲಿಯೇ ರಾಜನಾಥ್ ಸಿಂಗ್, ಆರ್ಮಿ ಚೀಫ್ ಮತ್ತು ಏರ್ ಫೋರ್ಸ್ ಚೀಫ್ ಮೂವರೂ ಪಾಕಿಸ್ತಾನಕ್ಕೆ ಗಟ್ಟಿಯಾಗಿ ಎಚ್ಚರಿಕೆ ನೀಡುತ್ತಿರುವುದು, ನೆರೆಯ ರಾಷ್ಟ್ರಕ್ಕೆ ಮುಂಬರುವ ದಿನಗಳು ಕಷ್ಟಕರವಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.(Indian Army Warning)
