ಸಾಂದರ್ಭಿಕ ಚಿತ್ರ
Hyderabad News: ತಂದೆಗೆ ಹೆದರಿ ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಬಾಲ್ಕನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 22 ವರ್ಷದ ಸಕೀನಾ ಬೇಗಂ ಎಂಬಾಕೆಯೇ ಈ ದುರ್ದೈವಿ.
ನಡೆದಿದ್ರೇನು?: ಸಕೀನಾ ಮತ್ತು ಆಕೆಯ ಗೆಳೆಯ ಅಲಿ ಕಳೆದ ವಾರವಷ್ಟೇ ಕೊಲ್ಲೂರು ಪೊಲೀಸ್ ಠಾಣಾ
ವ್ಯಾಪ್ತಿಯ ಒಂದು ಫ್ಲಾಟ್ ಗೆ ಬಂದಿದ್ದರು. ಅದು ಸಕೀನಾ ತಂದೆಗೆ ಸೇರಿದ ಫ್ಲ್ಯಾಟ್ ಆಗಿದ್ದು ಅಲ್ಲಿ ಯಾರೂ ವಾಸವಿರಲಿಲ್ಲ. ತಂದೆಯ ಬಳಿಯಿದ್ದ ಕೀಲಿ ಕೈ ಅನ್ನು, ತಂದೆಗೆ ತಿಳಿಯದಂತೆ ತೆಗೆದುಕೊಂಡು ಈ ಜೋಡಿ ಅಲ್ಲಿಗೆ ಬಂದಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು ಅವರು ಫ್ಲ್ಯಾಟ್ ಒಳಗಿದ್ದಾಗಲೇ ಸಕೀನಾಳ ತಂದೆ ಅನಿರೀಕ್ಷಿತವಾಗಿ ಅಲ್ಲಿಗೆ ಬಂದಿದ್ದಾರೆ.
ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ತಂದೆ ಅನುಮಾನಗೊಂಡು ಬಾಗಿಲು ತಟ್ಟಿದ್ದಾರೆ. ಹೊರಗಿರುವುದು ಅಪ್ಪನೇ ಎಂದು ತಿಳಿಯುತ್ತಿದ್ದಂತೆ ಸಕೀನಾ ಮತ್ತು ಅಲಿ ಗಾಬರಿಗೊಂಡಿದ್ದಾರೆ ಸಿಕ್ಕಿಬೀಳುವ ಭಯದಿಂದ ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಆ ಫ್ಲಾಟ್ ಇದ್ದದ್ದು ಎಂಟನೇ ಮಹಡಿಯಲ್ಲಿ. ಎಂಟನೇ ಮಹಡಿಯ ಬಾಲ್ಕನಿಯಿಂದ ಏಳನೇ ಮಹಡಿಗೆ ಇಳಿಯಲು ಇಬ್ಬರೂ ಸಾಹಸ ಮಾಡಿದ್ದಾರೆ ಗೆಳೆಯ ಅಲಿ ಆಕೆಯ ಕೈ ಹಿಡಿದು ಕೆಳಗೆ ಇಳಿಸಲು ಪ್ರಯತ್ನಿಸಿದರೂ, ಆ ಎತ್ತರದಲ್ಲಿ ಹಿಡಿತ ತಪ್ಪಿದೆ. ದುರಂತವಶಾತ್ ಸಕೀನಾ ಮೇಲಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪೊಲೀಸ್ ಕ್ರಮ: ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಕೀನಾಳ ಗೆಳೆಯ ಅಲಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದು ಕ್ಷಣದ ತಪ್ಪು ನಿರ್ಧಾರ ಮತ್ತು ಭಯ ಒಂದು ಜೀವ ಬಲಿಯಾಗಿದೆ.(Hyderabad News)
