ಹುಬ್ಬಳ್ಳಿ: ಪ್ರೀತಿಸಿ ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದ ಗರ್ಭಿಣಿ ಯುವತಿಯೊಬ್ಬಳನ್ನು ಆಕೆಯ ಪೋಷಕರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಭೀಕರ ಘಟನೆ ತಾಲೂಕಿನ ಇನಾಮ್ ವೀರಾಪುರ ಗ್ರಾಮದಲ್ಲಿ ನಡೆದಿದೆ.(Woman Murder Hubballi) ಘಟನೆಗೆ ಸಂಬಂಧಿಸಿದಂತೆ ಮೃತ ಮಾನ್ಯಾ ಅವರ ತಂದೆ ಸೇರಿದಂತೆ ಒಟ್ಟು 18 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಇನಾಮ್ ವೀರಾಪುರ ಗ್ರಾಮದ ಮಾನ್ಯಾ ಪಾಟೀಲ ಅವರು ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿವೇಕಾನಂದ ದೊಡ್ಡಮನಿ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ವಿವಾಹಕ್ಕೆ ಮಾನ್ಯಾ ಅವರ ಕುಟುಂಬದವರಿಂದ ತೀವ್ರ ವಿರೋಧವಿತ್ತು ಮಗಳು ಅನ್ಯಜಾತಿಯ ಯುವಕನೊಂದಿಗೆ ಸಂಸಾರ ನಡೆಸುತ್ತಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನು ಓದಿ: Hyderabad News: ಗೆಳೆಯನ ಜೊತೆ ರೂಮಿನಲ್ಲಿ ಸಿಕ್ಕಿ ಬೀಳುವ ಭಯದಿಂದ ಎಂಟನೇ ಮಹಡಿಯಿಂದ ಬಿದ್ದು ಯುವತಿ ಸಾವು
ಕೊಲೆಗೆ ನಡೆದ ಸಂಚು: ಭಾನುವಾರ ಸಂಜೆ ವಿವೇಕಾನಂದ ಅವರ ತಂದೆ ಮರಿಯಪ್ಪ ಮತ್ತು ಮಾವ
ಸುನೀಲ ಅವರು ಬೈಕ್ ಮೇಲೆ ತೆರಳುತ್ತಿದ್ದಾಗ ಆರೋಪಿಗಳು ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆಸಿ ಅವರನ್ನು ಕೊಲ್ಲಲು ಯತ್ನಿಸಿದ್ಧಾರೆ. ಈ ವಿಷಯ ತಿಳಿದು ವಿವೇಕಾನಂದ ಸ್ಥಳಕ್ಕೆ ಬಂದಾಗ, ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ ಮತ್ತು ಕುಟುಂಬಸ್ಥರು ಕಬ್ಬಿಣದ ರಾಡ್, ಕೊಡಲಿ ಹಾಗೂ ಪೈಪ್ಗಳಿಂದ ಹಲ್ಲೆ ನಡೆಸಿದ್ದಾರೆ
ಅಷ್ಟಕ್ಕೇ ನಿಲ್ಲದ ಆರೋಪಿಗಳ ಗುಂಪು ವಿವೇಕಾನಂದ ಅವರ ಮನೆಗೆ ನುಗ್ಗಿ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿದೆ. ಮನೆಯೊಳಗಿದ್ದ ವಿವೇಕಾನಂದರ ತಾಯಿ ರೇಣುಕಾ ಹಾಗೂ ಗರ್ಭಿಣಿ ಪತ್ನಿ ಮಾನ್ಯಾ ಅವರ ಮೇಲೆ ಕೂಡಲಿ ಮತ್ತು ರಾಡ್ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾನ್ಯಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.(Woman Murder Hubballi)
