duleep-trophy-2025-team-details
ದುಲೀಪ್ ಟ್ರೋಫಿ 2025: ಭಾರತೀಯ ಕ್ರಿಕೆಟ್ನಲ್ಲಿ ರಣಜಿ ಕ್ರಿಕೆಟ್ ಟೂರ್ನಿಗೆ ಇರುವಷ್ಟೇ ಇತಿಹಾಸ ದುಲೀಪ್ ಟ್ರೋಫಿ (Duleep Trophy) ಪಂದ್ಯವಳಿಗೂ ಇದೆ 1961ರಲ್ಲಿ ಶುರುವಾದ ಈ ಟೂರ್ನಿ ಮೊದಲೆಲ್ಲ ವಲಯ ಮಟ್ಟದಲ್ಲಿ ನಡೆಯುತಿತ್ತು. ಅದರಲ್ಲಿ 6 ವಲಯಗಳು ಆಡುತ್ತಿದ್ದವು(ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ , ದಕ್ಷಿಣ ಮತ್ತು ಈಶಾನ್ಯ) ಆದರೆ ಕಳೆದ ಸಾಲಿನಲ್ಲಿ ಟೂರ್ನಿಗೆ ಭಾರತ A ,B, C ಮತ್ತು D ಎಂದು ಹೊಸ ಟಚ್ ನೀಡಿದರು ಅದು ಹೆಚ್ಚು ಆಟಗಾರರಿಗೆ ಅವಕಾಶ ಸಿಗದ ಕಾರಣ ಮತ್ತೆ ಹಳೆ ಸ್ವರೂಪಕ್ಕೆ ಮರಳಿದೆ.
ಇದೆ ತಿಂಗಳ 28ರಂದು ಆರಂಭವಾಗುವ ಟೂರ್ನಿಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಬ್ಮನ್ ಗಿಲ್ ಉತ್ತರ ವಲಯದ ನಾಯಕನಾಗಿ ಪ್ರತಿನಿಧಿಸುತ್ತಿದ್ದಾರೆ. ಪಶ್ಚಿಮ ವಲಯದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರ ದಂಡೆ ತುಂಬಿದೆ.
ಇದನ್ನೂ ಓದಿ: Movie Review: ಹರೆಯದ ಮನಸ್ಸುಗಳ ತುಡಿತವನ್ನು ಅರಿತಿರುವ ‘ಗಂಟುಮೂಟೆ’
ತಂಡನಾಯಕನಾಗಿ ಶಾರ್ದೂಲ್ ಠಾಕೂರ್ ಇದ್ದಾರೆ . ದಕ್ಷಿಣ ವಲಯದ ನಾಯಕನಾಗಿ ತಿಲಕ್ ವರ್ಮಾ ನಾಯಕನಾದರೆ. ಪೂರ್ವ ವಲಯಕ್ಕೆ ಈಶನ್ ಕಿಶನ್ ನಾಯಕ. ಕೇಂದ್ರ ವಲಯಕ್ಕೆ ದೃವ್ ಜುರೆಲ್ ನಾಯಕನಾಗಿದ್ದರೆ. ಪೂರ್ವ ಮತ್ತು ಪಶ್ಚಿಮ ವಲಯ ತಂಡದಲ್ಲಿ ಭಾರತ ತಂಡ ಪ್ರತಿನಿಧಿಸಿದ ಆಟಗಾರರ ದಂಡೆ ತುಂಬಿದೆ. ದಕ್ಷಿಣ ಮತ್ತು ಪಶ್ಚಿಮ ವಲಯ ತಂಡಗಳು ನೇರ ಸೆಮಿಸ್ ತಲುಪಿದ್ದು ಉಳಿದ 4 ತಂಡಗಳು ಪ್ಲೇ ಅಪ್ ಆಡಿ ಗೆದ್ದ ತಂಡಗಳು ದಕ್ಷಿಣ ಮತ್ತು ಪಶ್ಚಿಮ ವಲಯ ತಂಡಗಳನ್ನು ಎದುರಿಸಲಿವೆ.
ದುಲೀಪ್ ಟ್ರೋಫಿ ಟೂರ್ನಿಗೆ ಈಶಾನ್ಯ ವಲಯ (North-East Zone) ಹೊರತುಪಡಿಸಿ ಉಳಿದೆಲ್ಲ ವಲಯಗಳು ತಂಡ ಪ್ರಕಟಿಸಿವೆ. ಇನ್ನು ಟೂರ್ನಿ ಪ್ರಾರಂಭಕ್ಕೆ ಸಮಯವಿರುವುದರಿಂದ ಈಶಾನ್ಯ ವಲಯ ತಡವಾಗಿ ತಂಡ ಪ್ರಕಟಿಸಬಹುದು.
ಪಶ್ಚಿಮ ವಲಯ ತಂಡ:
ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ, ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಲೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅರ್ಜಾನ್ ನಾಗವಾಸ್ವಾಲ, ದರ್ಮೇಂದ್ರ ಜಡೇಜಾ, ತುಷಾರ್ ದೇಶಪಾಂಡೆ.
ಪೂರ್ವ ವಲಯ ತಂಡ:
ಇಶಾನ್ ಕಿಶನ್ (ನಾಯಕ), ಅಭಿಮನ್ಯು ಈಶ್ವರನ್, ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡೆನಿಶ್ ದಾಸ್, ಶ್ರೀದಂ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಶಮಿ.
ಕೇಂದ್ರ ವಲಯ ತಂಡ:
ಧ್ರುವ್ ಜುರೆಲ್ (ನಾಯಕ), ರಜತ್ ಪಾಟಿದಾರ್, ಆರ್ಯನ್ ಜುಯಲ್, ಆಯುಷ್ ಪಾಂಡೆ, ಡ್ಯಾನಿಶ್ ಮಾಲೆವಾರ್, ಶುಭಂ ಶರ್ಮಾ, ಸಂಚಿತ್ ದೇಸಾಯಿ, ಯಶ್ ರಾಥೋಡ್, ಕುಲದೀಪ್ ಯಾದವ್, ಹರ್ಷ್ ದುಬೆ, ಆದಿತ್ಯ ಠಾಕ್ರೆ, ಮಾನವ್ ಸುತಾರ್, ದೀಪಕ್ ಚಹರ್, ಸರಾನ್ಶ್ ಜೈನ್, ಆಯುಷ್ ಪಾಂಡೆ, ಖಲೀಲ್ ಅಹ್ಮದ್.
ದಕ್ಷಿಣ ವಲಯ ತಂಡ:
ತಿಲಕ್ ವರ್ಮಾ (ನಾಯಕ), ಮೊಹಮ್ಮದ್ ಅಜರುದ್ದೀನ್, ತನ್ಮಯ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಝಾರ್, ನಾರಾಯಣ್ ಜಗದೀಸನ್, ತಿಪುರಣ ವಿಜಯ್, ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವಿಜಯ್ ಕುಮಾರ್ ವೈಶಾಕ್, ಬೇಸಿಲ್ ಎನ್.ಪಿ, ಗುರ್ಜಪ್ನೀತ್ ಸಿಂಗ್, ರಿಕಿ ಭುಯಿ, ಸ್ನೇಹಲ್ ಕೌತಾಂಕರ್.
ಇದನ್ನೂ ಓದಿ: ಮಹಾರಾಜ ಟಿ20 ಕ್ರಿಕೆಟ್ 2025: ಕರ್ನಾಟಕದ ಟಾಪ್ ತಂಡಗಳು ಮತ್ತು ಟೂರ್ನಿಯ ಪಯಣ
ಉತ್ತರ ವಲಯ ತಂಡ:
ಶುಭಮನ್ ಗಿಲ್ (ನಾಯಕ), ಶುಭಂ ಖಜುರಿಯಾ, ಅಂಕಿತ್ ಕುಮಾರ್ (ಉಪ ನಾಯಕ), ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್ವೀರ್ ಸಿಂಗ್ ಚರಕ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಕನ್ಹಾವ ಕಾಂಬೋಜ್, ಅಕಿಬ್ ನಬಿ, ಕನ್ಹಯ್ಯ ವಧಾವನ್.
