ಬೆಂಗಳೂರು: ಬೆಂಗಳೂರಿನ ನಿವಾಸಿಗಳ ಗಮನಕ್ಕೆ! ನಾಳೆ ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸ್ಥಿರ ವಿದ್ಯುತ್ ಪೂರೈಕೆಗಾಗಿ ಬೆಸ್ಕಾಂ (BESCOM) ಸಂಸ್ಥೆಯು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಕಾರಣದಿಂದ ಕರೆಂಟ್ ಕಟ್ ಆಗಲಿದೆ.(Bengaluru Power Cut)
ಯಾವ ಉಪಕೇಂದ್ರದಲ್ಲಿ ಕೆಲಸ? 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ಅಗತ್ಯ ದುರಸ್ತಿ ಕಾರ್ಯ ನಡೆಯಲಿದೆ. ಯಾವ ಸಮಯದಲ್ಲಿ ವಿದ್ಯುತ್ ಇರುವುದಿಲ್ಲ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳಲಿದೆ.
ನಾಳೆ ಕರೆಂಟ್ ಕಟ್ ಆಗುವ ಪ್ರದೇಶಗಳು:
ಶೋಭಾ ಸಿಟಿ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಈ ಕಳಗಿನ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ:
- ಶೋಭಾ ಸಿಟಿ, ಚೋಕ್ಕನಹಳ್ಳಿ
- ಡೊಮಿನೋಸ್ ಪಿಜ್ಜಾ – ಪ್ಯಾರಡೈಸ್ ನೂರ್ ನಗರ
- ಎಕ್ಸ್-ಸರ್ವಿಸ್ಮನ್ ಲೇಔಟ್
- ಪೊಲೀಸ್ ಕ್ವಾರ್ಟಸ್
- ಆರ್.ಕೆ. ಹೆಗ್ಡೆ ನಗರ (ವಿಸ್ತರಿತ ಭಾಗ)
- ಶಬರಿ ನಗರ, ನ್ಯೂ ಶಾಂತಿ ನಗರ
- ಕೆಂಪೇಗೌಡ ಲೇಔಟ್ ಬಾಲಾಜಿ ಲೇಔಟ್
- ನಾಗೇನಹಳ್ಳಿ ಗ್ರಾಮ, ನಾಗೇನಹಳ್ಳಿ, ಜಿಮ್ ಸ್ಟಮ್ ಬರ್ಡ್
- ರಿಜೆನ್ಸಿ ಪಾರ್ಕ್ ಎಸ್ತರ್ ಹಾರ್ಮೋನಿಕ್ ಲೇಔಟ್
- ಬೆಂಚ್ ರಾಯಲ್ ವುಡ್, ಅರ್ಕಾವತಿ ಲೇಔಟ್
- ಥಣಿಸಂದ್ರ
- ಬೆಳ್ಳಹಳ್ಳಿ, ಗ್ರಾಮ, ತಿರುಮೇನಹಳ್ಳಿ ಗ್ರಾಮ
- ಮಿಟ್ಟಿಗನಹಳ್ಳಿ, ಕೋಗಿಲು ಗ್ರಾಮ
ಬೆಸ್ಕಾಂ ಪ್ರಕಾರ, ನಿರ್ವಹಣಾ ಕಾರ್ಯಗಳು ಭವಿಷ್ಯದಲ್ಲಿ ಪದೇ ಪದೇ ಬರುವ ವಿದ್ಯುತ್ ತೊಂದರೆಗಳನ್ನು ತಪ್ಪಿಸಲು ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅತಿ ಅವಶ್ಯಕವಾಗಿವೆ. ಹಾಗಾಗಿ, ಈ ಪ್ರದೇಶಗಳ ನಿವಾಸಿಗಳು ನಾಳೆ ಹಗಲಿನಲ್ಲಿ ಸಹಕರಿಸಬೇಕೆಂದು ದೂರಲಾಗಿದೆ.
