Anchor Janhavi: ಬಣ್ಣದ ಲೋಕ ಹೊರಗಿನಿಂದ ನೋಡುವವರಿಗೆ ಇದು ನಗು, ಪ್ರೀತಿ ಗ್ರಾಮರ್ನ ಸಾಗರದಂತೆ ಕಾಣುತ್ತದೆ. ಆದರೆ ಇದರ ತೆರೆಮರೆಯಲ್ಲಿರುವ ವೈಯಕ್ತಿಕ ಬದುಕುಗಳು ಎಷ್ಟೊಂದು ಒಳನೋವುಗಳನ್ನು ಮರೆಮಾಚಿರುತ್ತವೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಹಾಗೆ ತಮ್ಮ ವೃತ್ತಿಜೀವನದ ಯಶಸ್ಸಿನ ಹಿಂದೆ ಒಂದು ದೊಡ್ಡ ದುರಂತವನ್ನೇ ಅಡಗಿಸಿಕೊಂಡು ಬಂದವರು ಜಾಹ್ನವಿ(Anchor Janhavi)

ಕನ್ನಡದ ಸುದ್ದಿ ಮಾಧ್ಯಮ ಲೋಕದಲ್ಲಿ ತಮ್ಮ ಸ್ಪಷ್ಟ ಹಾಗೂ ಸ್ಪುಟವಾದ ಮಾತುಗಾರಿಕೆ ಮತ್ತು ಧೈರ್ಯದಿಂದ ಅನೇಕ ಸಂದರ್ಶನಗಳನ್ನು ಮಾಡುವ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಸುದ್ದಿ ನಿರೂಪಕಿ ಜಾಹ್ನವಿ,(Anchor Janhavi) ಸದ್ಯ ತಮ್ಮ ನೋವಿನ ಕಥೆಯೊಂದಿಗೆ ಜನರ ಹೃದಯದ ಕದ ತಟ್ಟಿದ್ದಾರೆ. ಸುದ್ದಿ ನಿರೂಪಕಿ ಹಾಗೆಯೇ ಸಿನಿಮಾ ಮತ್ತು ಗಿಚ್ಚಿ ಗಿಲಿ ಗಿಲಿ ವೇದಿಕೆಗಳ ಮೂಲಕ ಪರಿಚಿತರಾದ ಇವರ ಬದುಕು, ಮೊದಲಿಗೆ ಸುಂದರ ಕನಸಾಗಿತ್ತು. ಆದರೆ ದಾಂಪತ್ಯದ ಹಾದಿಯಲ್ಲಿ ಆ ಕನಸು ಅಹಂಕಾರ ಮತ್ತು ವಿರಸದ ಬಿರುಗಾಳಿಗೆ ಸಿಲುಕಿ ಛಿದ್ರವಾಗಿದೆ.
ಹೃದಯ ಛಿದ್ರಗೊಳಿಸಿದ ಸತ್ಯ

ಜಾಹ್ನವಿ(Anchor Janhavi)ಅವರ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಕುತೂಹಲವಿರುವುದು ಹೊಸದೇನಲ್ಲ. ಪ್ರತಿ ಸಂದರ್ಶನದಲ್ಲೂ ಪ್ರತಿ ವೇದಿಕೆಯಲ್ಲೂ ಅವರು ತಮ್ಮ ವಿವಾಹ ಮತ್ತು ವಿಚ್ಚೇದನದ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಬಹುಶಃ ಪ್ರಚಾರಕ್ಕಾಗಿ ಅಲ್ಲದಿದ್ದರೂ, ತನಗಾದ ನೋವಿನ ಭಾರವನ್ನು ಹಂಚಿಕೊಳ್ಳುವ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳುವ ಸಲುವಾಗಿ ಮುಕ್ತವಾಗಿ ಎಲ್ಲವನ್ನು ತೆರೆದಿಟ್ಟಿದ್ದಾರೆ.
ಅವರು ತಮ್ಮ ಕಣ್ಣೀರಿನ ಕಥೆಯನ್ನು ಬಿಗ್ ಬಾಸ್(Kannada Bigboss) ಎಂಟ್ರಿ ಆದ ಬಳಿಕ ಆರಂಭದಲ್ಲಿ ಮನೆಯೊಳಗೆ ತೆರೆದಿಟ್ಟಿದ್ದರು. ಅಲ್ಲಿ ಜಿಮ್ ಏರಿಯಾದಲ್ಲಿ ಮಲ್ಲಮ್ಮ ಮತ್ತು ಕಾಕ್ರೋಚ್ ಸುಧಿ ಅವರ ಮುಂದೆ ಕುಳಿತು ಅವರು ಮಾತನಾಡಿದ ಮಾತುಗಳು, ಅವರಲ್ಲಿ ಹುದುಗಿದ್ದ ಆಳವಾದ ದುಃಖವನ್ನು ಹೊರಹಾಕಿದಂತಿತ್ತು. ಈಗ, ಮತ್ತೊಮ್ಮೆ ಹಬ್ಬದ ಸಂಭ್ರಮದ ನಡುವೆ ಮನೆಯ ಸದಸ್ಯರ ಮುಂದೆ ತಮ್ಮ ಬದುಕಿನ ತಿರುವು ನೀಡಿದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
“ನಮ್ಮದು ತುಂಬ ಟ್ರೆಡಿಷನಲ್ ಫ್ಯಾಮಿಲಿ ಜನ ಏನಂತಾರೋ ಅಂತ ಗೊತ್ತಿದ್ರೂ ನಮ್ಮನ್ನ ಹೇಗಾದ್ರೂ ಮಾಡಿ ಒಂದು ಮಾಡೋಕೆ ಪ್ರಯತ್ನಿಸಿದ್ರು ಎಂದು ಅವರು ಹೇಳಿದಾಗ, ಆ ಪ್ರಯತ್ನಗಳಗೆ ತಮ್ಮ ನೋವನ್ನು ಇನ್ನಷ್ಟು ಹೆಚ್ಚಿಸಿದ್ದವು ಎಂದು ಜಾನ್ಹವಿ ಹೇಳಿಕೊಂಡಿದ್ದಾರೆ(Anchor Janhavi)
ವಿಚ್ಛೇದನಕ್ಕೂ ಮುನ್ನವೇ ಎರಡನೇ ಮದುವೆಯಾದ ಗಂಡ

ಅಧಿಕೃತವಾಗಿ ವಿಚ್ಛೇದನ ಆಗುವುದಕ್ಕೂ ಮುನ್ನವೇ ಜಾಹ್ನವಿ ಮತ್ತು ಅವರ ಪತಿ ಸುಮಾರು ಎರಡು-ಎರಡೂವರೆ ವರ್ಷ ದೂರವೇ ಇದ್ದರಂತೆ ಏನಾದರೂ ಬದಲಾಗಬಹುದು ಸಂಬಂಧ ಮತ್ತೆ ಚಿಗುರಬಹುದು ಎಂಬ ನಂಬಿಕೆಯ ಕಿಡಿ ಆಕೆಯೊಳಗಿತ್ತು ಆದರೆ ಆ ನಂಬಿಕೆ ಕ್ರೂರ ಸತ್ಯದ ಮುಂದೆ ಅದು ಸುಟ್ಟುಹೋಯಿತು ಎಂದು ಜಾನ್ಹವಿ ತಮ್ಮ ದುಃಖ ತೋಡಿಕೊಂಡಿದ್ದಾರೆ.
“ನಮ್ಮಿಬ್ಬರ ಡಿವೋರ್ಸ್ ಅಧಿಕೃತವಾಗಿ ಆಗುವ ಮುನ್ನವೇ ಅವರಿಗೆ ಮದುವೆಯಾಗಿ ಒಂದು ಮಗು ಕೂಡ ಇತ್ತು ಎಂಬ ವಿಷಯ ನನಗೆ ಗೊತ್ತಾಯ್ತು ಎಂದು ಹೇಳುವಾಗ ಅವರ ಧ್ವನಿ ಕಂಪಿಸುತ್ತಿತ್ತು. ಆ ಆಘಾತವನ್ನು ನುಂಗುವ ಮೊದಲೇ ಆ ಸತ್ಯದ ಇನ್ನೊಂದು ಭಾಗ ಕೇಳಿ ಜಾಹ್ನವಿ ಸಂಪೂರ್ಣ ನುಚ್ಚು ನೂರಾಗಿದ್ದಾರೆ. ಅಸಲಿಗೆ ತನ್ನ ಪತಿ ಮದುವೆಯಾಗಿದ್ದು ಬೇರೆ ಯಾರನ್ನೋ ಅಲ್ಲ ನನ್ನ ತುಂಬ ಆಪ್ತ ಸ್ನೇಹಿತೆಯನ್ನೇ!” ಎಂದು ಹೇಳುವಾಗ ಜಾಹ್ನವಿಯ ನೋವು ಕೇವಲ ಮಾಜಿ ಪತಿಯ ಮೇಲಿರಲಿಲ್ಲ ಬದಲಿಗೆ ನಂಬಿಕಸ್ಥ ಸ್ನೇಹಿತೆ ಮಾಡಿದ ಮೋಸದ ಮೇಲಿತ್ತು.
ನಾವು ದೂರ ಇದ್ದ ಆ ಎರಡೂವರೆ ವರ್ಷಗಳಲ್ಲಿ ಇದೆಲ್ಲಾ ನಡೆದು ಹೋಗಿದೆ. ಅವಳು ನನ್ನ ಜೊತೆಗೇ ಇದ್ದವಳು ಇವರಿಗೆ ಹೇಗೆ ಕನೆಕ್ಟ್ ಆದಳೋ ಮದುವೆಯಾಗಿ ಮಗುನೂ ಇದೆ ಅಂತ ಕೇಳಿ ನನಗಂತೂ ದೊಡ್ಡ ಶಾಕ್ ಆಯ್ತು ಇದೆಲ್ಲಾ ನನಗೆ ಒಂದು ಸಿನಿಮಾ ಕಥೆಯಂತೆ ಕಾಣಿಸ್ತು,” ಎಂದು ಜಾನ್ಹವಿ(Anchor Janhavi) ಹೇಳಿಕೊಂಡಿದ್ದಾರೆ.
ತಮ್ಮ ಜೀವನದ ದುರಂತವನ್ನು ನೆನೆದು ಭಾವುಕರಾದ ಜಾಹ್ನವಿ, ಕಣ್ಣೀರನ್ನು ತಡೆಯಲಾಗದೇ ಅಳಲು ಶುರುಮಾಡಿದರು. ಆಗ ಮನೆಯ ಇತರ ಸದಸ್ಯರು, ಬಿಡಿ, ಬಿಡಿ, ಆ ಟಾಪಿಕ್ ಕ್ಲೋಸ್ ಮಾಡೋಣ,” ಎಂದು ಅವರನ್ನು ಸಮಾಧಾನಪಡಿಸಿ ವಿಷಯ ಬದಲಾಯಿಸಿದರು.
ಆದರೆ ಕೆಲ ಟ್ರೋಲ್ ಪೇಜ್ ಗಳಲ್ಲಿ ಜಾಹ್ನವಿ(Anchor Janhavi) ಅವರು ಜನರ ಗಮನವನ್ನ ತಮ್ಮತ್ತ ಸೆಳೆದುಕೊಳ್ಳಲು ಈ ರೀತಿಯಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಯಾವುದು ಏನೇ ಇರಲಿ ಈಗ ಅವರೆಲ್ಲಾ ಇರುವುದು ಬಿಗ್ ಬಾಸ್(Kannada Bigboss) ಮನೆಯಲ್ಲಿ. ಅಲ್ಲಿ ಆಡುವ ಪ್ರತಿ ಮಾತು, ನಡವಳಿಕೆ ಎಲ್ಲವೂ ಅವರ ಗೆಲುವು ಸೋಲಿನ ಮೇಲೆ ನಿರ್ಧಾರಿತವಾಗುತ್ತೆ.
