Karnataka Smart Bus Card
NCMC: ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ರಾಜ್ಯ ಸರ್ಕಾರ ಕೈ ಹಾಕಿದೆ.(Smart Ticketing) ಪ್ರಯಾಣವನ್ನು ಇನ್ನಷ್ಟು ಸುಲಭ, ವೇಗ ಮತ್ತು ಡಿಜಿಟಲ್ (Digital) ಮಾಡುವ ಪ್ರಯತ್ನ ನಡೆಯುತ್ತಿದೆ. ಈಗಿನಂತೆ ನಗದು ಹಣ (Cash) ನೀಡಿ ಟಿಕೆಟ್ ಪಡೆಯುವ ಪದ್ಯತಿಗೆ ಬದಲಾಗಿ, ಸ್ಮಾರ್ಟ್ ಕಾರ್ಡ್ (Smart Card) ಅಥವಾ ಮೊಬೈಲ್ ಮೂಲಕ ಪಾವತಿ (Mobile Payment) ಮಾಡಿ ಪ್ರಯಾಣಿಸುವ ವ್ಯವಸ್ಥೆ ಜಾರಿಯಾಗಲಿದೆ.
ಈ ಯೋಜನೆಯಡಿ ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ,’ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (National Common Mobility Card – NCMC) . ಸುಮಾರು 26,000ಕ್ಕೂ ಹೆಚ್ಚು ಬಸ್ಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಇದು ಕರ್ನಾಟಕದ ಸಾರಿಗೆ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ (Digital Revolution) ದಾರಿ ಮಾಡಿಕೊಡಲಿದೆ.
ಈ ಸ್ಮಾರ್ಟ್ ಕಾರ್ಡ್ನ ವಿಶೇಷತೆ ಏನೆಂದರೆ, ಇದು ಕೇವಲ ಬಸ್ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಮೆಟ್ರೋ (Metro) ಹಾಗೂ ಭವಿಷ್ಯದ ಉಪನಗರ ರೈಲುಗಳಲ್ಲಿಯೂ (Suburban Rail) ಇದೇ ಕಾರ್ಡ್ ಬಳಸಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇದರಿಂದ ಪ್ರಯಾಣಿಕರು ಒಂದೇ ಕಾರ್ಡ್ ಮೂಲಕ ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು.
“ಶಕ್ತಿ ಯೋಜನೆ” (Shakti Scheme) ಗೂ ಈ ಡಿಜಿಟಲ್ ಸ್ಪರ್ಶ ಸಿಗಲಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಈ ಯೋಜನೆ ಮುಂದುವರಿದರೂ, ಈಗ ಸ್ಮಾರ್ಟ್ ಕಾರ್ಡ್ ಮೂಲಕ ಅದರ ಲಾಭಪಡೆಯಬಹುದು. ಇದರಿಂದ ಪ್ರಯಾಣದ ನಿಖರ ಮಾಹಿತಿ ಸಂಗ್ರಹಿಸಲು ಹಾಗೂ ಸಬ್ಸಿಡಿ (Subsidy) ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು (Transparency) ಸರ್ಕಾರಕ್ಕೆ ಸಹಾಯವಾಗುತ್ತದೆ.
ಸ್ಮಾರ್ಟ್ ಟಿಕೆಟಿಂಗ್ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಹಲವು ಲಾಭಗಳಿವೆ. ಟಿಕೆಟ್ ಪಡೆಯಲು ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ, ನಗದು ಹಣದ ತೊಂದರೆ ಇಲ್ಲ, ಹಾಗೂ ಸಮಯ ಉಳಿತಾಯವಾಗುತ್ತದೆ.(Time Saving), ಜೊತೆಗೆ, ಟಿಕೆಟ್ ಪರಿಶೀಲನೆ ಮತ್ತು ಆದಾಯ ನಿರ್ವಹಣೆಯಲ್ಲಿಯೂ (Revenue Management) ಸುಧಾರಣೆ ಕಂಡುಬರುತ್ತದೆ.
ಒಟ್ಟಿನಲ್ಲಿ, ಈ ಯೋಜನೆ ಕರ್ನಾಟಕದ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಸುಧಾರಿತ, ಸುಗಮ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು (Technology-driven) ನೆರವಾಗಲಿದೆ. ಪುಯಾಣಿಕರ ಅನುಭವವನ್ನು ಉತ್ತಮಗೊಳಿಸುವ ದಿಕ್ಕಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
News Credit: ಶ್ರೀನಿಧಿ ಹೆಚ್. ಜಿ.
