Darshan Bail Cancel, Devil Song Postponed: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಡೆವಿಲ್'(Devil’) ಚಿತ್ರದ ಮೊದಲ ಹಾಡಿಗಾಗಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿದೆ.
ಒಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದರೆ, ಇನ್ನೊಂದೆಡೆ ಬಹುನಿರೀಕ್ಷಿತ ‘ಡೆವಿಲ್’(Devil’) ಚಿತ್ರದ ಹಾಡಿನ ಬಿಡುಗಡೆಯನ್ನು ಚಿತ್ರತಂಡ ಅನಿವಾರ್ಯವಾಗಿ ಮುಂದೂಡಿದೆ. ಇದು ಅಭಿಮಾನಿಗಳ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರನ್ನು ಮಾದರ್ ಚೋ*** ಎಂದು ನಿಂದಿಸಿದ ಹಿಂದಿ ಭಾಷಿಕ ಮಹಿಳೆ
‘ನೆಮ್ಮದಿ’ ಹಾಡಿಗೆ ‘ನೆಮ್ಮದಿ’ಯೇ ಇಲ್ಲ
ನಾಳೆ, ಅಂದರೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ (ಆಗಸ್ಟ್ 15) ‘ಡೆವಿಲ್’‘(Devil’) ಚಿತ್ರದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಎಂಬ ಹಾಡು ಬಿಡುಗಡೆಯಾಗಿ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಬೇಕಿತ್ತು. ಹಾಡಿನ ಬಗ್ಗೆ ಸೃಷ್ಟಿಯಾಗಿದ್ದ ಕ್ರೇಜ್ ಕೂಡ ಅಷ್ಟಿಷ್ಟಲ್ಲ. ಆದರೆ, ಹಾಡು ಬಿಡುಗಡೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ನಿಂದ ಬಂದ ತೀರ್ಪು ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಹಾಡಿನ ಬಿಡುಗಡೆಯನ್ನು ಮುಂದೂಡದೆ ಚಿತ್ರತಂಡಕ್ಕೆ ಬೇರೆ ದಾರಿಯಿರಲಿಲ್ಲ. ಈ ಕುರಿತು ‘ಡೆವಿಲ್'(Devil’) ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಶ್ರೀ ಜೈಮಾತಾ ಕಂಬೈನ್ಸ್’ ಅಧಿಕೃತವಾಗಿ ಟ್ವೀಟ್ ಮಾಡಿದ್ದು, “ನಾಳೆ ಬಿಡುಗಡೆಯಾಗಬೇಕಿದ್ದ ಮೊದಲ ಹಾಡಿನ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ” ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸುಪ್ರೀಂ ಆದೇಶಕ್ಕೆ ಕಿಚ್ಚನ ಟ್ವೀಟ್: ಬೀದಿ ನಾಯಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ
ಜಾಮೀನಿನ ಮೇಲೆ ಬಿಡುಗಡೆಯಾಗಿ ಶೂಟಿಂಗ್ ಮುಗಿಸಿದ್ದ ದರ್ಶನ್
‘ಕಾಟೇರ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ದರ್ಶನ್ ಅವರು ‘ಡೆವಿಲ್’ ಚಿತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಶೂಟಿಂಗ್ ಸ್ಥಗಿತಗೊಂಡಿತ್ತು.
ಜಾಮೀನಿನ ಮೇಲೆ ಹೊರಬಂದ ನಂತರ, ನ್ಯಾಯಾಲಯದ ಅನುಮತಿ ಪಡೆದು ವಿದೇಶದಲ್ಲೂ ಚಿತ್ರೀಕರಣ ಮುಗಿಸಿ, ತಮ್ಮ ಪಾತ್ರದ ಡಬ್ಬಿಂಗ್ ಅನ್ನೂ ಪೂರ್ಣಗೊಳಿಸಿ ಚಿತ್ರಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಿದ್ದರು.
ಆದರೆ ಸದ್ಯದ ಬೆಳವಣಿಗೆಯಿಂದಾಗಿ, ಸದ್ಯಕ್ಕೆ ‘ಡೆವಿಲ್’(Devil’) ಅಬ್ಬರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ.
